Home1232 ಕಿ.ಮೀ.: ಮನೆ ಸೇರಲು ಸಾಗಿದ ದೂರ (ಅನುಭವ ಕಥನ)
1232 ಕಿ.ಮೀ.: ಮನೆ ಸೇರಲು ಸಾಗಿದ ದೂರ (ಅನುಭವ ಕಥನ)
1232 ಕಿ.ಮೀ.: ಮನೆ ಸೇರಲು ಸಾಗಿದ ದೂರ (ಅನುಭವ ಕಥನ)1232 ಕಿ.ಮೀ.: ಮನೆ ಸೇರಲು ಸಾಗಿದ ದೂರ (ಅನುಭವ ಕಥನ)1232 ಕಿ.ಮೀ.: ಮನೆ ಸೇರಲು ಸಾಗಿದ ದೂರ (ಅನುಭವ ಕಥನ)1232 ಕಿ.ಮೀ.: ಮನೆ ಸೇರಲು ಸಾಗಿದ ದೂರ (ಅನುಭವ ಕಥನ)
Standard shipping in 3 working days

1232 ಕಿ.ಮೀ.: ಮನೆ ಸೇರಲು ಸಾಗಿದ ದೂರ (ಅನುಭವ ಕಥನ)

₹200
₹160
Saving ₹40
20% off
Product Description

ಕೊರೊನಾ ಹರಡದಂತೆ 2020ರಲ್ಲಿ ಹೇರಲಾದ ದೇಶವ್ಯಾಪಿ ಲಾಕ್‌ಡೌನ್, ಲಕ್ಷಾಂತರ ವಲಸೆ ಕಾರ್ಮಿಕರು ಕೆಲಸ, ಆಹಾರ ಮತ್ತು ಆಶ್ರಯವಿಲ್ಲದೆ ಅತಂತ್ರರಾಗುವ ಸನ್ನಿವೇಶ ನಿರ್ಮಾಣವಾಗಲು ಕಾರಣವಾಯಿತು. ಅಸಹಾಯಕರಾದ ಕಾರ್ಮಿಕರು ಹೇಗಾದರೂ ಸರಿ ಮನೆ ತಲುಪಬೇಕೆಂದು ನಡೆದುಕೊಂಡು, ಸೈಕಲ್ ತುಳಿಯುತ್ತ ಊರುಗಳ ಹಾದಿ ಹಿಡಿದರು.

ರಿತೇಶ್, ಆಶಿಶ್, ರಾಮ್‌ಬಾಬು, ಸೋನು, ಕೃಷ್ಣ, ಸಂದೀಪ್ ಮತ್ತು ಮುಕೇಶ್ ಬಿಹಾರ ಮೂಲದ ವಲಸೆ ಕಾರ್ಮಿಕರು. ಇತರರ ಹಾಗೆ ಇವರೂ ಕೂಡ ತಮ್ಮ ಬೈಸಿಕಲ್‌ಗಳಲ್ಲಿ ಊರು ತಲುಪಲು ಹೋದರು. ಏಳು ದಿನಗಳ ಕಾಲ ಪೊಲೀಸರು ಹಾಗೂ ಆಡಳಿತ ವ್ಯವಸ್ಥೆಯ ಕೌರ್ಯ, ಹಸಿವು, ಅವಮಾನ, ಹತಾಶೆ ಎಲ್ಲವನ್ನೂ ಎದುರಿಸಿಯೂ ತಮ್ಮ ಗುರಿ ಮುಟ್ಟುವಲ್ಲಿ ಯಶಸ್ವಿಯಾದರು. ದೆಹಲಿ ಸಮೀಪದ ಗಾಜಿಯಾಬಾದ್‌ನಿಂದ ಶುರುವಾದ ಈ ಪ್ರಯಾಣ ಕೊನೆಗೊಳ್ಳುವುದು ಬಿಹಾರದ ಸಹರ್ಸಾದಲ್ಲಿ. ಈ ಏಳು ಮಂದಿ ತಮ್ಮ ಪ್ರಯಾಣದ ವೇಳೆ ಅನುಭವಿಸಿದ ಸವಾಲುಗಳನ್ನು ರಾಷ್ಟ್ರ ಪ್ರಶಸ್ತಿ ವಿಜೇತ ಸಿನಿಮಾ ನಿರ್ದೇಶಕ ವಿನೋದ್ ಕಾಪ್ರಿ ತಮ್ಮ '1232 km: The Long Journey Home' ಕೃತಿಯಲ್ಲಿ ಕಟ್ಟಿಕೊಟ್ಟಿದ್ದರು. ಈ ಪುಸ್ತಕವನ್ನು ಪತ್ರಕರ್ತ ಸತೀಶ್ ಜಿ. ಟಿ. ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.

ನಮ್ಮೊಡನೆ ಇದ್ದರೂ ನಾವೆಂದೂ ಅರಿಯಲು ಬಯಸದ ವಲಸೆ ಕಾರ್ಮಿಕರೆಂಬ ಮನುಷ್ಯ ಜೀವಿಗಳ ಬದುಕನ್ನು, ನಮ್ಮ ಹೊಣೆಗೇಡಿತನವನ್ನು ನಮಗೆ ಪರಿಚಯಿಸುವ '1232 ಕಿ.ಮೀ.' ಕೃತಿ ಎಲ್ಲರೂ ಓದಲೇಬೇಕಿರುವ ಪುಸ್ತಕ. ಈ ಮಹತ್ವದ ಪುಸ್ತಕ ಪ್ರಜೋದಯ ಪ್ರಕಾಶನದ ಹೊಸ ಪ್ರಕಟಣೆ. 200 ರೂ. ಮುಖಬೆಲೆಯ ಪುಸ್ತಕಕ್ಕೆ ಶೇ.20 ರಿಯಾಯಿತಿ ನೀಡಲಾಗಿದೆ.

Share

Secure Payments

Shipping in India

Great Value & Quality
Create your own online store for free.
Sign Up Now